ಅಭಿಪ್ರಾಯ / ಸಲಹೆಗಳು

ಕೌಶಲ್ಯ ತರಬೇತಿ ಕಾರ್ಯಕ್ರಮ

ಕೌಶಲ್ಯ ತರಬೇತಿ ಕಾರ್ಯಕ್ರಮ
(ಲೆಕ್ಕಶೀರ್ಷಿಕೆ ರಾಜ್ಯವಲಯ ಯೋಜನೆ 2225-03-277-2-37) (2016-17ನೇ ಸಾಲಿನ ತರಬೇತಿ, ಅರಿವು ಮತ್ತು ಪ್ರೋತ್ಸಾಹ,ಹಿಂದುಳಿದ ವರ್ಗಗಳ
ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮದಡಿ ಒದಗಿಸಿರುವ ಆಯವ್ಯಯ ರೂ.3466.00 ಲಕ್ಷಗಳಲ್ಲಿ ಹಂಚಿಕೆ ಮಾಡಲಾಗುವುದು)
ಹಿಂದುಳಿದ ವರ್ಗಗಳ ನಿರುದ್ಯೋಗಿ ಮಹಿಳಾ/ಪುರುಷ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು
2015-16 ನೇ ಸಾಲಿನಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1.ಬೆಂಗಳೂರಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಸಂಸ್ಥೆಯ ಮೂಲಕ ಫ್ಯಾಷನ್ ಟೆಕ್ನಾಲಜಿ ತರಬೇತಿ.
1.National Institute of Fashion Technology, ಬೆಂಗಳೂರು ಸಂಸ್ಥೆಯ ಮೂಲಕ ಫ್ಯಾಶನ್ ಟೆಕ್ನಾಲಜಿಯ,
ಈ ಕೆಳಗಿನ ಕೋರ್ಸ್‍ಗಳಿಗೆ ಉಚಿತ ತರಬೇತಿಯನ್ನು ನೀಡಲಾಗುವುದು.
Sl. No. Course Minimum Qualification Age limit Duration
1 Garment manufacturing technology
(Developing Line supervisor)
10+2 Pass 18-35 6 months
2 Apparel quality control, product
analysis and assurance
10+2 Pass 18-35 6 months
3 Garment construction (Developing Sewing
operators for Garment manufacturing units
and also boutique establishment)
10+2 Pass 18-35 6 months
2.ತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ ರೂ.1000/-
ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ ರೂ.3000/-ಗಳು.
2.VTU ಕೌಶಲ್ಯ ಅಭಿವೃದ್ಧಿ ತರಬೇತಿ ಕೆಂದ್ರÀಗಳ ಮೂಲಕ ಕೌಶಲ್ಯ ತರಬೇತಿ.
1.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ,
ಕಲಬುರ್ಗಿ ಹಾಗೂ ಮೈಸೂರು ವಿಭಾಗೀಯ ಕೇಂದ್ರಗಳ ಮೂಲಕ ಈ ಕೆಳಗಿನ ಕೋರ್ಸ್‍ಗಳಿಗೆ ಉಚಿತ ತರಬೇತಿಯನ್ನು
ನೀಡಲಾಗುವುದು (ಒಬ್ಬ ಅಭ್ಯರ್ಥಿಗೆ ಒಂದು ಕೋರ್ಸ್‍ನಲ್ಲಿ ಮಾತ್ರ ತರಬೇತಿಯನ್ನು ನೀಡಲಾಗುವುದು).
Sl. No. Course Minimum Qualification Age limit Duration
1 Bar Bending 8 Pass 18-35 2 months
2 Masonary
3 Shuttering Carpentry
4 Plumbing
5 Painting
6 Scaffolding
2.ತರಬೇತಿ ಸಂಸ್ಥೆ ಇರುವ ಸ್ಥಳಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ ರೂ.1000/-
ಮತ್ತು ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ ರೂ.3000/-ಗಳು.
VTU ಮೂಲಕ ತರಬೇತಿ
3.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ಕೆಳಕಂಡ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ:
1.ಕ.ರಾ.ರ.ಸಾ.ನಿಗಮ:
1) ಕೇಂದ್ರಿಯ ತರಬೇತಿ ಕೇಂದ್ರ, ಬೆಂಗಳೂರು
2) ಪ್ರಾದೇಶಿಕ ತರಬೇತಿ ಕೇಂದ್ರ, ಮಳವಳ್ಳಿ
3) ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ
2.ಬೆಂ.ಮ.ಸಾ.ಸಂಸ್ಥೆ:
1)ಚಾಲಕ ತರಬೇತಿ ಕೇಂದ್ರ, ವಡ್ಡರಹಳ್ಳಿ, ಬೆಂಗಳೂರು
3.ಈ.ಕ.ರ.ಸಾ.ನಿಗಮ:
1) ಪ್ರಾದೇಶಿಕ ತರಬೇತಿ ಕೇಂದ್ರ, ಹುಮನಾಬಾದ್
2) ಚಾಲಕ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿ
4.ವಾ.ಕ.ರ.ಸಾ.ನಿಗಮ:
1) ಪ್ರಾದೇಶಿಕ ತರಬೇತಿ ಕೇಂದ್ರ, ಹುಬ್ಬಳ್ಳಿ
ಅ) ನಿಗದಿಪಡಿಸಿರುವ ಅರ್ಹತೆಗಳು:
1) ವಯೋಮಿತಿ: ಕನಿಷ್ಠ 21 ವರ್ಷಗಳು ಗರಿಷ್ಠ 35 ವರ್ಷಗಳು ಪೂರ್ಣಗೊಂಡಿರಬೇಕು.
2) ಎಲ್.ಎಂ.ವಿ ಪರವಾನಗಿ ಪಡೆದು ಕನಿಷ್ಠ ಒಂದು ವರ್ಷ ಪೂರ್ಣಗೊಂಡಿರಬೇಕು. ಒಂದು ವೇಳೆ ಟ್ರ್ಯಾಕ್ಟರ್
ಎಲ್.ಎಂ.ವಿ ಆಗಿದ್ದರೆ ಪರವಾನಗಿ ಪಡೆದು 2 ವರ್ಷ ಪೂರ್ಣಗೊಂಡಿರಬೇಕು.
3) ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು.
ಆ) ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಸೌಲಭ್ಯಗಳ ವಿವರಗಳು:
1) ಉಚಿತ ಊಟ ಮತ್ತು ವಸತಿ ವ್ಯವಸ್ಥೆ.
2) ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರೂ.1,000/- ತರಬೇತಿ ಭತ್ಯೆ ಹಾಗೂ ರೂ.500/- ಸಮವಸ್ತ್ರ
ಭತ್ಯೆಯನ್ನು ತರಬೇತಿ ಮುಕ್ತಾಯಗೊಂಡ ಬಳಿಕ ನೀಡಲಾಗುವುದು.
4.ಜಿಲ್ಲಾ ಮಟ್ಟದಲ್ಲಿ ಲಘು ವಾಹನ ಚಾಲನಾ ತರಬೇತಿ
1) ಲಘು/ಭಾರೀ ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು,
ಹಿಂದುಳಿದ ವರ್ಗಗಳ ಪ್ರವರ್ಗ-1/2ಎ/3ಎ/3ಬಿ ಗೆ ಸೇರಿರಬೇಕು.
2) ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
3) ಕನಿಷ್ಠ 21 ವರ್ಷ ವಯೋಮಿತಿಯನ್ನು ಪೂರೈಸಿರಬೇಕು.
4) ಭಾರೀ ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಯು ಲಘು ವಾಹನ ಚಾಲನಾ ಪರವಾನಗಿ
ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು.
5) ಕೇಂದ್ರ ಮೋಟಾರು ವಾಹನ ನಿಯಮಾವಳಿಗಳು 1989 ನಿಯಮ 5 ರಂತೆ ವೈದ್ಯಕೀಯ ಪ್ರಮಾಣ
ಪತ್ರವನ್ನು ಹಾಜರುಪಡಿಸಬೇಕು.
6) ಕನಿಷ್ಠ 1 ತಿಂಗಳ ಅವಧಿಯ ತರಬೇತಿಯನ್ನು ತರಬೇತಿ ಕೇಂದ್ರಗಳು ನೀಡಬೇಕು.
7) ಸರ್ಕಾರದ ಆದೇಶ ಸಂಖ್ಯೆ: ಸಾಆ/ಪ್ರವರ್ತನ-3/ಪಿಆರ್-105/2013-14, ದಿನಾಂಕ: 27.09.2013 ರ ಅನ್ವಯ
ಈ ಕೆಳಗಿನಂತೆ ಗರಿಷ್ಠ ತರಬೇತಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅ. ಆಟೋರಿಕ್ಷಾ - ರೂ.3000/-
ಆ. ಲಘು ಮೋಟಾರು ವಾಹನ - ರೂ.4000/-
ಇ. ಸಾರಿಗೆ ವಾಹನ - ರೂ.6000/-
8) ಪ್ರಾದೇಶಿಕ ಸಾರಿಗೆ ಕಛೇರಿಗಳಿಂದ ಅಂಗೀಕೃತವಾದ ಲಘು/ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಗಳ ಮೂಲಕ
ಮೇಲ್ಕಾಣಿಸಿದ ದರದ ಗರಿಷ್ಠ ಮಿತಿಗೆ ಒಳಪಟ್ಟು ಕರ್ನಾಟಕ ಪಾರದರ್ಶಕತೆ ಅಧಿನಿಯಮ 1999 ರನ್ವಯ ತರಬೇತಿ ಕಾರ್ಯ
ಕ್ರಮವನ್ನು ಅನುಷ್ಠಾನ ಮಾಡಲಾಗುವುದು.
9) ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರೂ.1,000/- ತರಬೇತಿ ಭತ್ಯೆಯನ್ನು ತರಬೇತಿ ಮುಕ್ತಾಯಗೊಂಡ ಬಳಿಕ ನೀಡುವುದು.
ಅ) ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ವಿಧಾನ:
1) ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಸದರಿ ತರಬೇತಿ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರವನ್ನು ನೀಡಿ,
ಅರ್ಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಬೇಕು.
2) ಆಯ್ಕೆ ಸಮಿತಿ -
1 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷರು
2 ಪ್ರಾದೇಶಿಕ ಸಾರಿಗೆ ಅಧಿಕಾರಿ ಸದಸ್ಯರು
3 ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿ
3) ಅರ್ಹ ಅರ್ಜಿಗಳನ್ನು ಪರಿಶೀಲಿಸಿ, ಈ ಕೆಳಗಿನ ಮೀಸಲಾತಿ ಅನುಪಾತದ ಆಧಾರದಲ್ಲಿ ಪ್ರತಿ ಜಿಲ್ಲೆಗೆ ಗರಿಷ್ಠ
20 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿಗೆ ನಿಯೋಜಿಸಬೇಕು.
ಕ್ರ. ಸಂ. ಪ್ರವರ್ಗ ಮೀಸಲಾತಿ ಅನುಪಾತ
1 1 15%
2 2ಎ 53%
3 3ಎ 15%
4 3ಬಿ 17%
  ಒಟ್ಟು 100%
4) ಅಭ್ಯರ್ಥಿಯು ತರಬೇತಿಯನ್ನು ಮಧ್ಯದಲ್ಲೇ ಬಿಟ್ಟು ಹೋದಲ್ಲಿ ನಿಯಮಾನುಸಾರ ತರಬೇತಿ ವೆಚ್ಚವನ್ನು ಅಭ್ಯರ್ಥಿಗಳಿಂದ
ವಸೂಲಿ ಮಾಡತಕ್ಕದ್ದು.
ಆ) ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಅರ್ಹತೆ:
1) ಕೋರ್ಸ್‍ಗೆ ಸಂಬಂಧಿಸಿದಂತೆ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು.
2) 18-35 ವಯೋಮಿತಿಯಲ್ಲಿರಬೇಕು.
3) ಅಭ್ಯರ್ಥಿಗಳ ಮತ್ತು ಕುಟುಂಬದ ವಾರ್ಷಿಕ ಆದಾಯ ಮಿತಿ ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂ.2.50 ಲಕ್ಷ ಹಾಗೂ
ಪ್ರವರ್ಗ 2ಎ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ರೂ.1.00 ಲಕ್ಷಗಳು.
4) ಅವಧಿ: ಗರಿಷ್ಠ 6 ತಿಂಗಳ ತರಬೇತಿ.
5) ತರಬೇತಿ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆ ನೀಡಲಾಗುವುದು.

ಇತ್ತೀಚಿನ ನವೀಕರಣ​ : 03-04-2021 12:08 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸರ್ಕಾರದ ಸಚಿವಾಲಯ ಹಿಂದುಳಿದ ವರ್ಗಳ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080