ಅಭಿಪ್ರಾಯ / ಸಲಹೆಗಳು

ದೇವರಾಜ ಅರಸು ವಿದೇಶಿ ವ್ಯಾಸಂಗ

ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ:

ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಹೆಚ್.ಡಿ/ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ
ವಾರ್ಷಿಕ ಗರಿಷ್ಠ ರೂ.10.00 ಲಕ್ಷದಂತೆ ಧನಸಹಾಯ ನೀಡಲಾಗುತ್ತದೆ.
ನಿಗದಿಪಡಿಸಿರುವ ಅರ್ಹತೆಗಳು:
1.ಭಾರತ ದೇಶದ ಪ್ರಜೆಯಾಗಿದ್ದು,ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು
2. ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್.ಡಿ/ಸಂಶೋಧನೆಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ಈ ಹಿಂದಿನ ಸ್ನಾತಕೋತ್ತರ ಪದವಿಯಲ್ಲಿ
(ಎಲ್ಲಾ ಶೈಕ್ಷಣಿಕ ವರ್ಷಗಳೂ ಸೇರಿದಂತೆ ಕನಿಷ್ಠ ಶೇ.70 ಅಂಕಗಳು ಅಥವಾ ಸಮಾನವಾದ ಗ್ರೇಡ್ ಪಡೆದಿರಬೇಕು.
3. ವಯೋಮಿತಿ-ಅರ್ಜಿ ಸಲ್ಲಿಸಲು ಪಿಹೆಚ್.ಡಿ/ಸಂಶೋಧನೆ ಮಾಡುವ ಅಭ್ಯರ್ಥಿಗಳು ಏಪ್ರಿಲ್ 1 2019 ಕ್ಕೆ 27 ವರ್ಷದ ವಯೋ ಮಿತಿಯೊಳಗಿರಬೇಕು
,ಸ್ನಾತಕೋತ್ತರ ಪದವಿ ಮಾಡುವ ಅಭ್ಯರ್ಥಿಗಳು ಏಪ್ರಿಲ್ 1 2019 ಕ್ಕೆ 25 ವರ್ಷದ ವಯೋ ಮಿತಿಯೊಳಗಿರಬೇಕು.
4. ಆದಾಯ ಮಿತಿ-ವಿದ್ಯಾರ್ಥಿಯ ಹಾಗೂ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.6.00 ಲಕ್ಷದ ಮಿತಿಯೊಳಗಿರಬೇಕು.
5. ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನ ಸಹಾಯವನ್ನು ನೀಡಲಾಗುವುದು
6. ವಾಸಸ್ಥಳ ದೃಢೀಕರಣ ಪತ್ರ ಸಲ್ಲಿಸುವುದು.
7. ಧನ ಸಹಾಯ ಮೊತ್ತ-ವಾರ್ಷಿಕವಾಗಿ ಗರಿಷ್ಠ ರೂ.10.00 ಲಕ್ಷ ಅಥವಾ ವಾಸ್ತವ ವೆಚ್ಚ ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ನೀಡಲಾಗುವುದು.
8. ಅಭ್ಯರ್ಥಿಯು G-MAT,TOEFL,GRE,IELTS,SAT, ಯಾವುದಾದರು ಒಂದು ಪ್ರವೇಶ ಪರೀಕ್ಷೆ ತೇರ್ಗಡೆಯಾಗಿರಬೇಕು.
9. Top One Thousand Global University Ranking ಹೊಂದಿರುವ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರಬೇಕು ಹಾಗೂ Offer Letter ಹೊಂದಿರಬೇಕು.
10. ಸ್ನಾತಕೋತ್ತರ ಪದವಿ ಗರಿಷ್ಠ 2 ವರ್ಷ ಅಥವಾ ಕೋರ್ಸ್ ಮುಕ್ತಾಯದ ಅವಧಯಲ್ಲಿ ಯಾವುದು ಮೊದಲೋ ಆ ಅವಧಿಯನ್ನು ಪರಿಗಣಿಸಲಾಗುವುದು.
11. ಆಯ್ಕೆ ವಿಧಾನ – ಮೂರು ಹಂತಗಳನ್ನು ಒಳಗೊಂಡಿದೆ.
ಅ)ವಿದ್ಯಾರ್ಥಿಯಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ
ಆ) ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಾಕಾರಿಗಳ ಕಛೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ಮತ್ತು ಮನೆ ಭೇಟಿ ಮಾಡಿ ಸ್ಥಳ ಪರಿಶೀಲನೆ.
ನಿಗದಿಪಡಿಸಿರುವ ಮೀಸಲಾತಿ
ಪ್ರವರ್ಗ ಶೇಕಡವಾರು
ಪ್ರವರ್ಗ-1 24%
ಪ್ರವರ್ಗ-2ಎ 46%
ಪ್ರವರ್ಗ-3ಎ 14%
ಪ್ರವರ್ಗ-3ಬಿ 16%
ಒಟ್ಟು 100%
(ಒಂದು ವೇಳೆ, ವೈದ್ಯಕೀಯ ಕಾರಣಗಳಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಅಂತಹವರು, ವೈದ್ಯಕೀಯ
ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.)
12. ಅ) ಸಮಾನ ಕೋರ್ಸುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವ್ಯಾಸಂಗ ಮಾಡುತ್ತಿದ್ದಲ್ಲಿ ಅಂತಹವರು ಅರ್ಹರಿರುವುದಿಲ್ಲ.(ಉದಾ: ಬಿ.ಎ ನಂತರ ಬಿ.ಕಾಂ,
ಎಂ.ಎ (ಕನ್ನಡ) ನಂತರ ಎಂ.ಎ (ಇಂಗ್ಲೀಷ್), ಬಿ.ಎಡ್ ನಂತರ ಎಲ್.ಎಲ್.ಬಿ, ಇತ್ಯಾದಿಗಳಿಗೆ ಪ್ರವೇಶ ಪಡೆದಿದ್ದಲ್ಲಿ)
ಆ) ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಕೋರ್ಸಿನ ಅವಧಿಯಲ್ಲಿ ಮೆಡಿಕಲ್ ಪ್ರಾಕ್ಟೀಸ್ ಮಾಡುತ್ತಿದ್ದಲ್ಲಿ,
ಈ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.
ಇ) ಕಲೆ, ವಿಜ್ಞಾನ, ಹಾಗೂ ವಾಣಿಜ್ಯ ಕೋರ್ಸುಗಳ, ಪದವಿ ಅಥವಾ ಸ್ನಾತಕೋತ್ತರ ಪದವಿಗಳಲ್ಲಿ ಉತ್ತೀರ್ಣ / ಅನುತ್ತೀರ್ಣರಾದವರು ಅಂಗೀಕೃತ
ವೃತ್ತಿಪರ ಅಥವಾ ತಾಂತ್ರಿಕ ಸರ್ಟಿಫಿಕೇಟ್, ಡಿಪ್ಲೋಮ, ಪದವಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡಿದ್ದಲ್ಲಿ, ಹಾಗೂ ಇತರೆ ರೀತಿ ಅರ್ಹರಿದ್ದಲ್ಲಿ ಅವರು
ಈ ಯೋಜನೆಯ ಅಡಿ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಒಂದಕ್ಕಿಂತ ಹೆಚ್ಚು ಬಾರಿ ಕೋರ್ಸುಗಳ ಬದಲಾವಣೆ ಮಾಡಿಕೊಂಡವರು ಅರ್ಹರಿರುವುದಿಲ್ಲ.
ಈ) ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ.
13. ಪ್ರತಿ ಮಾಹೆ ವಿದ್ಯಾರ್ಥಿಯ ತರಗತಿ ಹಾಜರಾತಿ ಕನಿಷ್ಟ ಶೇ.75 ರಷ್ಟಿರಬೇಕು.

 

ಇತ್ತೀಚಿನ ನವೀಕರಣ​ : 03-04-2021 12:08 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸರ್ಕಾರದ ಸಚಿವಾಲಯ ಹಿಂದುಳಿದ ವರ್ಗಳ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080